ಭದ್ರಾವತಿ ನಗರದ ಮೂಲೆಕಟ್ಟೆಯಲ್ಲಿ ಕಾರು ಬೈಕ್ ಗೆ ಅಪಘಾತ ಕರ್ತವ್ಯ ನಿರತ ಸಂಗಯ್ಯ.ಎಂ, ಗೃಹರಕ್ಷಕ ಸ್ಥಳದಲ್ಲಿಯೇ ಸಾವು.
ಹದ್ದಿನಕಣ್ಣು ಡಿಜಿಟಲ್ ಮೀಡಿಯಾ 11-10-2026
ಭದ್ರಾವತಿ : ನಗರದ ಮೂಲೆಕಟ್ಟೆಯಲ್ಲಿ ಕಾರು ಮತ್ತು ಬೈಕ್ ಗೆ ಅಪಘಾತವಾಗಿದ್ದು ಈ ಸಂದರ್ಭದಲ್ಲಿ ಬೈಕ್ ನಲ್ಲಿದ್ದ ಕರ್ತವ್ಯನಿರತ ಇಬ್ಬರು ಗೃಹರಕ್ಷಕ ಸಿಬ್ಬಂದಿಗಳಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
ನಗರದ ಪೇಪರ್ ಟೌನ್ ಪೋಲಿಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಗೃಹರಕ್ಷಕರು ರಾತ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯದ ಗಸ್ತಿಗೆ ಹೋಗುವ ಸಂದರ್ಭ ದಲ್ಲಿ ಮೂಲೆಕಟ್ಟೆಯಲ್ಲಿ ಬೈಕ್ ಮತ್ತು ಕಾರಿಗೆ ಅಪಘಾತ ವಾಗಿ ಸ್ಥಳದಲ್ಲಿಯೇ ಹೊಳೆಹೊನ್ನೂರು ಘಟಕದ
ಸಂಗಯ್ಯ.ಎಂ ಗೃಹರಕ್ಷಕ ಮೃತಪಟ್ಟಿದ್ದು, ಮತ್ತೋರ್ವ ಮುರಳೀಧರ್ ಎಂಬ ಗೃಹರಕ್ಷಕನಿಗೆ ಗಂಬೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ.
ಭದ್ರಾವತಿ ತಾಲ್ಲೂಕು ಆಸ್ಪತ್ರೆಗೆ ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರು ಹೆಚ್.ಪಿ.ಚೇತನ್ ಮತ್ತು ಉಪ ಸಮಾದೇಷ್ಟರಾದ ಹಾಲಪ್ಪ ಡಾವಣಗೇರಿ ಬೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಬ್ಯೂರೋ ವರದಿ