Posts

ಭದ್ರಾವತಿ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ವಿವಿದೆಡೆ ದಿ.29-10-2026 ರಂದು ವಿದ್ಯುತ್ ವ್ಯತ್ಯಯವಾಗಲಿದೆ.

Image
ಹದ್ದಿನ ಕಣ್ಣು ನ್ಯೂಸ್ ಕನ್ನಡ ಡಿಜಿಟಲ್ ಮೀಡಿಯಾ 28-10-2026 ಭದ್ರಾವತಿ : ಲಕ್ಕವಳ್ಳಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ದಿನಾಂಕ : 29-10-2026 ಗುರುವಾರದಂದು ಬೆಳಗ್ಗೆ 9:00 ಗಂಟೆಯಿಂದ ಸಂಜೆ  5:30 ಗಂಟೆಯವರೆಗೆ  ಬಿ.ಆರ್.ಪಿ. ಕುವೆಂಪು ಯೂನಿವರ್ಸಿಟಿ, ಬಿಳಿಕಲ್ ಮೇನ್ಸ್, ಸಿಂಗನಮನೆ, ಶಾಂತಿನಗರ, ಶಂಕರಘಟ್ಟ, ನಲ್ಲಿಸರ. ಮಾಳೇನಹಳ್ಳಿ, ಗೋಣಿಬೀಡು, ತಮ್ಮಡಿಹಳ್ಳಿ, ಮಲ್ಲಿಗೇನಹಳ್ಳಿ, ಮಲ್ಲಿಗೇನಹಳ್ಳಿ ಕ್ಯಾಂಪ್, ವದಿಯೂರು. ಗ್ಯಾರೇಜ್ ಕ್ಯಾಂಪ್. ಹೆಚ್.ಕೆ. ಜಂಕ್ಷನ್, ಹುಣಸೇಕಟ್ಟೆ, ರಂಗನಾಥಪುರ, ಗೌಳಿಗೆರೆ ಕ್ಯಾಂಪ್ ಇತ್ಯಾದಿ ಪ್ರದೇಶಗಳು.  ಪ್ರದೇಶಗಳಲ್ಲಿನ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ದಯವಿಟ್ಟು ಗ್ರಾಹಕರು ಸಹಕರಿಸಲು ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆ ಮೂಲಕ ಕೋರಿದ್ದಾರೆ. ಬ್ಯೂರೋ ವರದಿ

ಶಿವಮೊಗ್ಗದಲ್ಲಿ ದಸರಾ ಮೆರವಣಿಗೆ ಸಂದರ್ಭದಲ್ಲಿ ಸೋಮಣ್ಣ ಆನೆ ಮಾಡಿದ ಅವಾಂತರದಿಂದ ನೆಲಕ್ಕೆ ಬಿತ್ತು ಅಂಭಾರಿ.

Image
ಹದ್ದಿನಕಣ್ಣು ನ್ಯೂಸ್ ಕನ್ನಡ ಡಿಜಿಟಲ್ ಮೀಡಿಯಾ 21-10-2026 .                                             ಶಿವಮೊಗ್ಗ : ನಗರದಲ್ಲಿ ಆಯೋಜಿಸಲಾಗಿದ್ದ ದಸರಾ ಮಹೋತ್ಸವ ಮೆರವಣಿಗೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹವಿರುವ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಾಡಿರುವ ಪರಿಣಾಮ ಅಂಬಾರಿ ಕೆಳಗುರುಳಿರುವ ಘಟನೆ ಸಂಭವಿಸಿದೆ. ಸೋಮಣ್ಣ ಆನೆಯ ಮೇಲಿದ್ದ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹವಿದ್ದ ಅಂಬಾರಿ ನೆಲಕ್ಕೆ ಉರುಳಿರುವುದು. ಸ್ಥಳದಲ್ಲಿ  ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ವಾಗಿದ್ದು, ಜಂಬೂಸವಾರಿ ಮೆರವಣಿಗೆಯ ವೇಳೆ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ  ಅನಾಹುತ ಸಂಭವಿಸಿಲ್ಲಾ ಎನ್ನಲಾಗಿದೆ. ದಸರಾ ಜಂಬೂಸವಾರಿಗೆಂದು ಸಕ್ರೆಬೈಲು ಆನೆ ಬಿಡಾರ ದಿಂದ ಮೂರು ಆನೆಗಳನ್ನು ಕರೆ ತರಲಾಗಿದ್ದು, ಮೆರವಣಿಗೆ ಸಂದರ್ಭದಲ್ಲಿ ಸೋಮಣ್ಣ ಆನೆ ಮಾಡಿದ ಅವಾಂತರದಿಂದ ಕೋಟೆ ರಸ್ತೆ ಮತ್ತು ಗಾಂಧಿ ಬಜಾ‌ರ್ ವ್ಯಾಪ್ತಿಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು ಎನ್ನಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಸೋಮಣ್ಣ ಆನೆಯ ಮೇಲೆ ಇರಿಸಲಾಗಿದ್ದ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹ ಮಂಟಪ ಸಮೇತ ಕೆಳಕ್ಕೆ ಬಿದ್ದ ಘಟನೆ ನಡೆದಿರುವ ಹ...

ಸಾನವಿ ಭಾರದ್ವಾಜ್ ರವರು ಭರತನಾಟ್ಯದ ಮೂಲಕ ಶ್ರೀ ಚಾಮುಂಡೇಶ್ವರಿ ದೇವಿಗೆ ಅಷ್ಟಾವಧಾನ ಸೇವೆ ಅರ್ಪಿಸಿದರು.

Image
ಭದ್ರಾವತಿ: ನಗರಸಭೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ  ನಾಡಹಬ್ಬ ದಸರಾ ಪ್ರಯುಕ್ತ  ಶಿವಮೊಗ್ಗ ಕರ್ನಾಟಕ ಕಲಾಶ್ರೀ ವಿದೂಷಿ ಪುಷ್ಪ ಕೃಷ್ಣಮೂರ್ತಿರವರ ಶಿಷ್ಯೆ ಸಾನವಿ ಭಾರದ್ವಾಜ್ ಶ್ರೀ ಚಾಮುಂಡೇಶ್ವರಿ ದೇವಿಗೆ ಭರತನಾಟ್ಯದ ಮೂಲಕ  ಅಷ್ಟಾವಧಾನ  ಸೇವೆ ಅರ್ಪಿಸಿದರು. ನಾಡಹಬ್ಬ ದಸರಾ ಸಂದರ್ಭದಲ್ಲಿ  ಕೆಲವು ವರ್ಷಗಳಿಂದ ದೇವಿಗೆ ಭರತನಾಟ್ಯ ಸೇವೆ ಸಲ್ಲಿಸಲಾಗುತ್ತಿದ್ದು, ಈ ಭಾರೀ  ಅಷ್ಟಾವಧಾನ ಸೇವೆ ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾಗಿದ್ದಾರೆ,  ಅಷ್ಟಾವಧಾನ ಎಂದರೆ ದೇವರಿಗೆ ಎಂಟು ವಿಧದ ಸಾಂಪ್ರದಾಯಿಕ ಹಾಗು ಕಲಾತ್ಮಕ ಸೇವೆಗಳನ್ನು ಏಕಕಾಲದಲ್ಲಿ ಅಥವಾ ಕ್ರಮಬದ್ಧವಾಗಿ ಅರ್ಪಿಸುವ  ಒಂದು ವಿಶೇಷ ಪೂಜಾ ವಿಧಾನವಾಗಿದೆ,ಭರತನಾಟ್ಯ ಸೇವೆ ಅರ್ಪಿಸಿದ ಕಲಾವಿದೆ ಸಾನವಿ ಭಾರದ್ವಾಜ್ ಅವರನ್ನು ನಗರಸಭೆಯ ದಸರಾ ಆಚರಣೆ ಸಮಿತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಪ್ರಥಮ ದರ್ಜೆ ಸಹಾಯಕ ಆರ್. ನರಸಿಂಹಮೂರ್ತಿ, ಪ್ರಮುಖರಾದ ಮೋಹನ್, ಎಸ್. ನರಸಿಂಹಚಾರ್, ವೈ.ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಪ್ರಜಾಸೇವಾ ಆಂದೋಲನ ಸಭೆ.

Image
ಹದ್ದಿನಕಣ್ಣು ಡಿಜಿಟಲ್ ಮೀಡಿಯಾ 18-10-2026 ಭದ್ರಾವತಿ: ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ  ಹೊಳೆಹೊನ್ನೂರು 2ನೇ ಹೋಬಳಿಯ ಆನವೇರಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ್ ರವರ ಅಧ್ಯಕ್ಷತೆಯಲ್ಲಿ  "ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ" ಅಭಿಯಾನ ದಡಿ  ಪ್ರಜಾಸೇವೆ ಆಂದೋಲನಾ ಸಭೆ ಆಯೋಜಿಸ ಲಾಗಿತ್ತು.       ಪ್ರಜಾಸೇವಾ ಸಭೆಯಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯಗಳು ಹಾಗೂ ವಿವಿಧ ಇಲಾಖೆಗಳ ಸೇವೆಗಳನ್ನು ತಲುಪಿಸುವ ಉದ್ದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು,  ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಆಡಳಿತ ವ್ಯವಸ್ಥೆಯನ್ನು  ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಗಳು ಮಹತ್ವದ ಪಾತ್ರ ವಹಿಸುತ್ತವೆ ಎನ್ನಲಾಗಿದೆ. ಜನರು ತಮ್ಮ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ  ತಂದು ಸರ್ಕಾರಿ ಪ್ರಜಾಸೇವೆ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಜಾಸೇವಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ತಹಶೀಲ್ದಾರ್ ಮತ್ತು ತಾಲ್ಲೂಕು ಮಟ್ಟದ  ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಜನಪ್ರತಿ ನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಬ್ಯೂರೋ ವರದಿ

ಭದ್ರಾವತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವ ಹೊಸಮನೆ ಪೊಲೀಸರ ಬಲೆಗೆ.

Image
ಹದ್ದಿನಕಣ್ಣು ಡಿಜಿಟಲ್ ಮೀಡಿಯಾ 16-10-2026 ಭದ್ರಾವತಿ:  ನಗರದ ಸತ್ಯಸಾಯಿ ನಗರದಲ್ಲಿ  ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ  ಖಚಿತ ಮಾಹಿತಿಯ ಮೇರೆಗೆ ಹೊಸಮನೆ ಪಿ ಸ್ ಐ ಶ್ರೀಮತಿ ಭಾರತಿ ಎಸ್ ಎನ್ ರವರು ಕಾರ್ಯಾಚರಣೆ ನಡೆಸಿ  ಓರ್ವನನ್ನು ಹೊಸಮನೆ ಪೊಲೀಸರು ಬಂಧಿಸಿರುವ ಘಟನೆ ಸಂಭವಿಸಿದೆ. ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯು ನಗರದ ಸೀಗೆಬಾಗಿಯ ನೇತಾಜಿ ರಸ್ತೆ ನಿವಾಸಿ ಅಜಗರ್ ಅಲಿ ಯಾನೆ ರಾಯಿಲ್ (32) ಬಂಧಿತ  ಆರೋಪಿಯಿಂದ 600 ಗ್ರಾಂ ತೂಕದ 30 ಸಾವಿರ ರೂ. ಮೌಲ್ಯದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  ಈ ಸಂಬಂಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬ್ಯೂರೋ ವರದಿ

ಭದ್ರಾವತಿ ಹೊಸಮನೆ ಪೋಲಿಸರ ಕಾರ್ಯಾಚರಣೆ ಕಳ್ಳತನ ಪ್ರಕರಣದ ಆರೋಪಿ ಪೋಲಿಸರ ಬಲೆಗೆ.

Image
ಹದ್ದಿನಕಣ್ಣು ಡಿಜಿಟಲ್ ಮೀಡಿಯಾ 15-10-2026 ಭದ್ರಾವತಿ: ನಗರದ ಹೊಸಮನೆ ತಮ್ಮಣ್ಣ ಕಾಲೋನಿಯಲ್ಲಿ ಬೀಗ ಹಾಕಿದ್ದ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೊಸಮನೆ ಪೋಲಿಸ್ ಠಾಣೆ ಪೋಲಿಸರ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಕಳುವಾಗಿದ್ದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿ ಕೊಳ್ಳಲಾಗಿದೆ. ತಮ್ಮಣ್ಣ ಕಾಲೋನಿಯ ನಿವಾಸಿ ವಿಜಯ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಮನೆಯ ಬಾಗಿಲಿಗೆ ಬೀಗ ಹಾಕಿದ್ದ ಸಂದರ್ಭದಲ್ಲಿ ಒಳನುಗ್ಗಿದ ಕಳ್ಳರು ಚಿನ್ನಾಭರಣ ಗಳನ್ನು ಕಳವು ಮಾಡಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಒಟ್ಟು 48 ಗ್ರಾಂ ತೂಕದ ಚಿನ್ನಾಭರಣಗಳು ಕಳುವಾಗಿದ್ದು, ಅವುಗಳ ಅಂದಾಜು ಮೌಲ್ಯ 4,80,000 ರೂ. ಎಂದು ತಿಳಿಸಲಾಗಿದೆ. ಕಳುವಾದ ಚಿನ್ನಾಭರಣಗಳಲ್ಲಿ 44 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ನಾಲ್ಕು ಚಿನ್ನದ ಉಂಗುರಗಳು ಸೇರಿವೆ. ಈ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಹೊಸಮನೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 305ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.          ಕಾರ್ಯಾಚರಣೆಯಲ್ಲಿ ಆರೋಪಿ ಬಂಧನ:  ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಕಾರ್ಯಪ್ರವೃತ್ತ ರಾದ ಹೊಸಮನೆ ಪೊಲೀಸರು, ತಮ್ಮ...

ಪ್ರಧಾನ ಮಂತ್ರಿ ಸೂರ್ಯಫರ್ ಉಚಿತ ವಿದ್ಯುತ್ ಯೋಜನೆಯು ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ : ಹೆಚ್.ಆರ್.ವೀರೇಂದ್ರ.

Image
ಹದ್ದಿನಕಣ್ಣು ಡಿಜಿಟಲ್ ಮೀಡಿಯಾ 15-10-2026 ಭದ್ರಾವತಿ :  ಪ್ರಧಾನ ಮಂತ್ರಿ ಸೂರ್ಯ ಫರ್ ಸೇವಾ ಸೇತು ಯೋಜನೆಯನ್ನು ಪರಿಣಾಮಕಾರಿಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮೆಸ್ಕಾಂ  ಅನುಷ್ಠಾನಗೊಳಿಸಲು ಮುಂದಾಗಿದೆ ಎಂಬುದಾಗಿ  ಮೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಆರ್.ವೀರೇಂದ್ರ ತಿಳಿಸಿದರು. ಅ. 15 ರ ಗುರುವಾರ ನಗರದ ಉಂಬ್ಳೆಬೈಲ್ ರಸ್ತೆಯ ಮೆಸ್ಕಾಂ ನಗರ ಉಪ ವಿಭಾಗ ಮತ್ತು ಗ್ರಾಮಾಂತರ ಉಪವಿಭಾಗ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸೇವಾ ಸೇತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು  ಪ್ರಧಾನ ಮಂತ್ರಿ ಸೂರ್ಯಫರ್ ಸೇವಾ ಸೇತು ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸ ಲಾಗಿದ್ದು, ಈ ಯೋಜನೆಯಿಂದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಇದಕ್ಕೆ ಪೂರಕವಾಗಿ ವಿವಿಧ ಸೋಲಾರ್ ಕಂಪನಿಗಳ ಅಧಿಕೃತ ಮಾರಾಟಗಾರರೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು. ಸೋಲಾರ್ ಅಳವಡಿಕೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಲಿದ್ದು, ಅಲ್ಲದೆ ಗ್ರಾಹಕರಿಗೆ ಬ್ಯಾಂಕ್‌ ಗಳಿಂದ ಸಾಲ ಸೌಲಭ್ಯ ಸಹ ಕಲ್ಪಿಸಲಿದ್ದಾರೆ. ಸೋಲಾರ್ ಅಳವಡಿಕೆಯಿಂದ ಮೆಸ್ಕಾಂಗೆ ವಿದ್ಯುತ್ ಉಳಿತಾಯ ವಾಗಲಿದ್ದು, ಜೊತೆಗೆ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ವಾಗಲಿದೆ. 20 ವರ್ಷಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆದು ಕೊಳ್ಳಬಹುದಾಗಿದೆ ಎಂದರು. ನಗರ ಸಹಾಯಕ ಕಾರ್ಯನಿರ್ವಾಹ...