ಭದ್ರಾವತಿಯಲ್ಲಿ ಉದ್ಘಾಟನೆಯಾಯಿತು ತಾಲ್ಲೂಕು ಬಂಜಾರ ಮಹಿಳಾ ಸಂಘ.
ಹದ್ದಿನಕಣ್ಣು ಡಿಜಿಟಲ್ ನ್ಯೂಸ್ ಭದ್ರಾವತಿ 15-03-2025
ಭದ್ರಾವತಿ : ತಾಲ್ಲೂಕು ಮಹಿಳಾ ಸಂಘ ಭದ್ರಾವತಿ ಶಾಖೆ ವತಿಯಿಂದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಸಭಾಂಗಣದಲ್ಲಿ ಶ್ರೀ ಸಂತ ಸೇವಾಲಾಲ್ ರ ಜಯಂತೋತ್ಸವ ಹಾಗೂ ಭದ್ರಾವತಿ ತಾಲ್ಲೂಕು ಮಹಿಳಾ ಬಂಜಾರ ಸಂಘದ ಉದ್ಘಾಟನೆ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.ಶಾಸಕರು ಹಾಗೂ ಕೆ ಆರ್ ಐ ಡಿ ಎಲ್ಅಧ್ಯಕ್ಷರರಾದ
ಬಿ.ಕೆ ಸಂಗಮೇಶ್ವರ್ ಸಹೋದರರು ಹಾಗೂ ಮಾಜಿ ಅಧ್ಯಕ್ಷರು ನಗರಸಭೆ ಹಾಗೂ ನಗರಸಭಾ ಸದಸ್ಯರಾದ ಬಿಕೆ ಮೋಹನ್ ರವರಿಂದ ಕಾರ್ಯಕ್ರಮವನ್ನು ಶ್ರೀ ಸಂತ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡುವುದರ ಮತ್ತು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ದೀಪ ಬೆಳಗಿಸಿ ಮಾತನಾಡಿದ ಬಿ.ಕೆ ಮೋಹನ್ ರವರು ಬಂಜಾರ ಸಮುದಾಯ ಕರ್ತವ್ಯದಲ್ಲಿ ಮತ್ತು ಕಠಿಣ ಪರಿಶ್ರಮದಲ್ಲಿ ಯಾವತ್ತಿಗೂ ಸ್ಮರಣೀಯ ಮತ್ತು ಅವರ ಪರಿಶ್ರಮವನ್ನು ಅಲ್ಲಗಳೆಯಲು ಸಾಧ್ಯವಿಲ್ಲ,ದೇಶಕ್ಕೂ ರಾಜ್ಯಕ್ಕೂ ಅವರ ಕೊಡುಗೆ ಬಹಳವಿದೆ ಎಂದರು.
ಶ್ರೀಮತಿ ಚೇತನ ಆರ್ ಎಂ ಎಸ್ ಸಿ ಎಂ ಇ ಡಿ ಶಿಕ್ಷಣ ಇಲಾಖೆರವರು ಮಾತನಾಡಿ ಸಮುದಾಯ ಇದುವರೆಗೂ ಬೆಳೆದು ಬಂದ ರೀತಿ ಅದರ ವೈಶಿಷ್ಟ್ಯಗಳನ್ನು ಕುರಿತು ಮಾತನಾಡಿದರು ಇನ್ನೂ ಅನೇಕರು ಮಾತನಾಡಿ ಸಂಘಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಣ್ಣ ಬಣ್ಣದ ವೈಶಿಷ್ಟ್ಯಮಯವಾದ ಬಂಜಾರ ಸಮುದಾಯದ ಸಾಂಪ್ರದಾಯಕ ಉಡುಗೆ ಗಳನ್ನು ತೊಟ್ಟು ಬಂಜಾರ ಸಮುದಾಯದ ಅನೇಕ ಹೆಣ್ಣು ಮಕ್ಕಳು ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿದ್ದರು, ಶ್ರೀಮತಿ ಪಾರ್ವತಿ ಬಾಯಿ ಸಂಸ್ಥಾಪಕ ಅಧ್ಯಕ್ಷರು ತಾಲ್ಲೂಕು ಮಹಿಳಾ ಬಂಜಾರ ಸಂಘ, ಇವರ ಅಧ್ಯಕ್ಷತೆ ಯಲ್ಲಿ ಅದ್ದೂರಿಯಾಗಿ ನೆರವೇರಿತು, ಹಾಗೂ
ಬಂಜಾರ ಸಮುದಾಯದ ಮಹಿಳೆಯರು ಸಂಭ್ರಮ ಹಾಗೂ ಕುತೂಹಲದಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪರಸಪ್ಪ ಕುರುಬರ ಬಗರ್ ಹುಕುಂ ಸಮಿತಿ ಅಧ್ಯಕ್ಷರಾದ ಮಣಿಶೇಖರ್.
ಎಸ್ ಕುಮಾರ್. ಪ್ರೇಮ್ ಕುಮಾರ್. ಕೃಷ್ಣ ನಾಯಕ್ ಆರ್ ವೆಂಕಟೇಶ್. ಜುಂಜಾ ನಾಯ್ಕ್ , ರವಿನಾಯ್ಕ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಭೆ ಸಮಾರಂಭ ಮುಕ್ತಾಯವಾಯಿತು. ಆಗಮಿಸಿದ್ದ ಎಲ್ಲರಿಗೂ ಭೋಜನವನ್ನು ಏರ್ಪಡಿಸಲಾಗಿತ್ತು.