ಭದ್ರಾವತಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ.

ಹದ್ದಿನಕಣ್ಣು ಡಿಜಿಟಲ್ ನ್ಯೂಸ್ ಭದ್ರಾವತಿ 21-03-2025 
ಭದ್ರಾವತಿ : ತಾಲ್ಲೂಕು ಕಾನೂನು ಸೇವಾ ಸಮಿತಿ ಭದ್ರಾವತಿ ವಕೀಲರ ಸಂಘ ತಾಲ್ಲೂಕು ಪಂಚಾಯತ್ ಭದ್ರಾವತಿ ಇವರ ಸಂಯುಕ್ತ ಆಶ್ರಯದಲ್ಲಿ ಮಾ. 21 2025 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು  ಆಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಭದ್ರಾವತಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಧಿಕಾರಿಯವರಾದ ಗಂಗಣ್ಣ. ಎಂ ನೆರವೇರಿಸಿದರು.
 ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ  ಹಾಗೂ ಕುವೆಂಪು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾದಶಿವಕುಮಾರ್ ಎಂ ವಕೀಲರು ಇವರು  ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ವಿಷಯವಾಗಿ ಪೂರ್ವ ತಯಾರಿ ವಿಷಯ ಕುರಿತು ಮಾತನಾಡಿದ ಅವರು ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನಿಜವಾದ ಅರ್ಥದಲ್ಲಿ ಸಾಕಾರ ಗೊಳಿಸಲು ಸ್ಥಳೀಯ ಆಡಳಿತದಲ್ಲಿ ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಸಭೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಯನ್ನು ಹೆಚ್ಚಿಸಲು ಹೊತ್ತು ನೀಡಬೇಕಾಗಿದೆ, ಗ್ರಾಮದ ಸರಿಸುಮಾರು ಅರ್ಧದಷ್ಟು ಜನಸಂಖ್ಯೆಯನ್ನು ಪ್ರತಿ  ನಿಧಿಸುವ ಮಹಿಳೆಯರು ವಾರ್ಡ್ ಮತ್ತು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಮಂಡಿಸುವುದು ಬಹಳ ಪ್ರಮುಖವಾಗಿದೆ.
 ಈ ಹಿನ್ನೆಲೆಯಲ್ಲಿ ಉಲ್ಲೇಖ ಒಂದರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 3ಎಚ್ ಅನ್ವಯ ಮಹಿಳೆಯರಿಗೆ ಗ್ರಾಮ ಸಭೆಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗಿದೆ ಉಲ್ಲೇಖ ಎರಡರಿಂದ ತಿಳಿಸಿರುವಂತೆ ಪ್ರತಿ ವರ್ಷವೂ ಮಹಿಳೆಯರ ಗ್ರಾಮ ಸಭೆಗಳನ್ನು ಆಯೋಜಿಸಲು ಸರ್ಕಾರದಿಂದ ಹೊರಡಿಸಲಾಗಿದೆ ಅದರಂತೆ ಮಹಿಳಾ ಸ್ನೇಹ ಗ್ರಾಮ ಪಂಚಾಯಿತಿ ಅಭಿಯಾನ ಮತ್ತು ಮಹಿಳಾ ಗ್ರಾಮ ಸಭೆಗಳ ನಡೆಸಬೇಕೆಂದು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಬಾಗಿದಾರರ ವಿಶೇಷವಾಗಿ ಸ್ಥಳೀಯ ಮಹಿಳಾ ಸ್ವ- ಸಹಾಯ ಸಂಘ ಸ್ತ್ರೀ ಶಕ್ತಿ ಸಂಘಗಳ ಸಹಭಾಗಿತ್ವದಲ್ಲಿ ಅಗತ್ಯ ಪೂರ್ವ ಸಿದ್ಧತೆಗಳೊಂದಿಗೆ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ ಚಟುವಟಿಕೆಗಳನ್ನು ಆಯೋಜಿಸಿ ಅರ್ಥಪೂರ್ಣ ಮಹಿಳಾ ಗ್ರಾಮ ಸಭೆಗಳನ್ನು ನಡೆಸಿ ಮಹಿಳೆಯರಿಂದ ಮೂಡಿ ಬಂದಂತಹ ಬೇಡಿಕೆ ಸಮಸ್ಯೆಗಳನ್ನು ಪ್ರಶ್ನೆಗಳನ್ನು ಸಂಬಂಧಿಸಿದ ಇತರ ಇಲಾಖೆಗಳ ಸ್ಪಂದಿಸಿ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀಮತಿ ದೀಪಮಾಲ , ಗೋಪಾಲ ಸಹಾಯಕ ಲೆಕ್ಕಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಭದ್ರಾವತಿ ಹಾಗೂ ನ್ಯಾಯಾಲಯದ ಸಿಬ್ಬಂದಿ ಶ್ರೀಮತಿ ತಾರ ಎ ಹಾಗೂ ವಿವಿಧ ಮಹಿಳಾ ಸ್ವ ಸಹಾಯ  ಗುಂಪಿನ ಸದಸ್ಯರು ಭಾಗವಹಿಸಿದ್ದರು.

ಬ್ಯೂರೋ ವರದಿ

Popular posts from this blog

ಅರಬಿಳಚಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಖಾಲಿ ಇರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.

ಹಾರನಹಳ್ಳಿ ಗೃಹರಕ್ಷಕದಳ ಘಟಕದ ವತಿಯಿಂದ ಮಹಿಳೆಯರಿಗೆ ಸನ್ಮಾನ.

ಭದ್ರಾವತಿ ನಗರದ ಮೂಲೆಕಟ್ಟೆಯಲ್ಲಿ ಕಾರು ಬೈಕ್ ಗೆ ಅಪಘಾತ ಕರ್ತವ್ಯ ನಿರತ ಸಂಗಯ್ಯ.ಎಂ, ಗೃಹರಕ್ಷಕ ಸ್ಥಳದಲ್ಲಿಯೇ ಸಾವು.