ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಅಟ್ಟಹಾಸದ ವಿರುದ್ದ ಚುಂಚಾದ್ರಿ ಮಹಿಳಾ ವೇದಿಕೆಯಿಂದ ನಡೆಯಿತು ಪ್ರತಿಭಟನೆ.
ಹದ್ದಿನಕಣ್ಣು ಡಿಜಿಟಲ್ ನ್ಯೂಸ್ 28-04-2025
ಭದ್ರಾವತಿ : ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರವಾದಿ ಗಳು ಏ. 22-2025 ರಂದು ನಡೆಸಿದ ಗುಂಡಿನದಾಳಿಯು ಒಂದು ಹೇಯ ಕೃತ್ಯವನ್ನು ಖಂಡಿಸಿ ಚುಂಚಾದ್ರಿ ಮಹಿಳಾ ವೇದಿಕೆಯು ಏ.28 ರ ಸೋಮವಾರ ತಾಲ್ಲೂಕು ಕಚೇರಿ ಅವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಮಾತನಾಡಿದ ಚುಂಚಾದ್ರಿ ವೇದಿಕೆ ಅಧ್ಯಕ್ಷರು ಮಾತನಾಡಿ ಕಾಶ್ಮೀರವು ನಮ್ಮ ದೇಶಕ್ಕೆ ಸೇರಿದ್ದಾಗಿದೆ, ಅದರೆ ಕೆಲವರು ದೇಶದ ಒಳಗೆ ಇದ್ದು ಹೊರಗಿಂದ ಬರುವ ಉಗ್ರರಿಗೆ ಸಹಾಯ ಮಾಡುವವರನ್ನು ಹುಡುಕಿ ಅವರಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸುವ ವ್ಯವಸ್ಥೆ ಯಾಗಬೇಕಿದೆ ಮತ್ತು ಮುಂದಿನ ದಿನಗಳಲ್ಲಿ ಯಾರು ಕೂಡ ಉಗ್ರರಿಗೆ ಅವರಿಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಹೆದರುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಬೇಕು ಮತ್ತು ಇದರ ಜೊತೆಗೆ ಕೇಂದ್ರ ಸರ್ಕಾರವು ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿ ಉಗ್ರರ ಒಳ ನುಸುಳುವಿಕೆಯನ್ನು ನಿಗ್ರಹಿಸಬೇಕೆಂದು ಆಗ್ರಹಿಸಿ ಚುಂಚಾದ್ರಿ ಮಹಿಳಾ ವೇದಿಕೆಯ ವತಿಯಿಂದ ತಹಶೀಲ್ದಾರ್ ರವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಉಗ್ರರ ದಾಳಿಯಲ್ಲಿ ಹತ್ಯೆಗೀಡಾದ 26 ಜನರಿಗೆ ಚುಂಚಾದ್ರಿ ಮಹಿಳಾ ವೇದಿಕೆಯ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇವೆ ಎಂದರು.
ಬ್ಯೂರೋ ವರದಿ