ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದ ಕೊಲೆ ಆರೋಪಿ ಕೊಕ್ಕೋ ಅಲಿಯಾಸ್ ಕುಮಾರನ ಕಾಲಿಗೆ ಗುಂಡು ಹಾರಿಸಿದ ಪಿ ಎಸ್ ಐ ಕೃಷ್ಣ ಕುಮಾರ್.
ಹದ್ದಿನಕಣ್ಣು ಡಿಜಿಟಲ್ ನ್ಯೂಸ್ 06-05-2025
ಭದ್ರಾವತಿ: ಆರೋಪಿಗಳ ಹುಡುಕಾಟದ ಕಾರ್ಯಾಚರಣೆ ಯಲ್ಲಿದ್ದ ಹೊಸಮನೆ ಪೋಲಿಸ್ ಠಾಣೆ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದ ಆರೋಪಿ ಕೊಕ್ಕೋ ಆಲಿಯಾಸ್ ಕುಮಾರನ ಕಾಲಿಗೆ ಹೊಸಮನೆ ಪಿ ಎಸ್ ಐ ಕೃಷ್ಣ ಕುಮಾರ್ ಮಾನೆ ಗುಂಡು ಹಾರಿಸಿರುವ ಘಟನೆ ಕಾರೆಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕ್ರಿಕೆಟ್ ಆಟದ ವಿಚಾರವಾಗಿ ಕಳೆದ ರಾತ್ರಿ ನಡೆದ ಜಗಳದಲ್ಲಿ ಅರುಣ್ ಎಂಬಾತನ ಕೊಲೆ ಮಾಡಲಾಗಿದೆ ಎನ್ನಲಾಗಿದೆ, ಕೊಲೆಗೆ ಕಾರಣರಾದ ಆರೋಪಿಗಳನ್ನು ಪೋಲಿಸರು ಹುಡುಕಾಟ ನಡೆಸಿದಾಗ ಪ್ರಮುಖ ಆರೋಪಿ ಹೊಸಮನೆ ಹನುಮಂತ ನಗರದ ನಿವಾಸಿ ಕೊಕ್ಕೋ ಆಲಿಯಾಸ್ ಕುಮಾರ (19) ತಾಲ್ಲೂಕಿನ ಕಾರೆಹಳ್ಳಿ ಗ್ರಾಮದಲ್ಲಿರುವ ಮಾಹಿತಿ ಆಧಾರದ ಮೆರೆಗೆ ಹೊಸಮನೆ ಪಿ ಎಸ್.ಐ. ಕೃಷ್ಣ ಕುಮಾರ್ ಮಾನೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲು ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಆರೋಪಿ ಅರುಣ್ ಕುಮಾರ್ (19) ಎಂದು ಗುರುತಿಸಿದ್ದು ಈತನ ವಿರುದ್ಧ ಐದು ಪ್ರಕರಣಗಳಿದ್ದು, ಕೊಲೆ ಪ್ರಕರಣದಲ್ಲಿ ಆರೋಪಿ ಯಾಗಿದ್ದ ಈತನನ್ನು ಬಂಧಿಸಲು ಹೋದಾಗ ಪೊಲೀಸ್ ಸಿಬ್ಬಂದಿ ಹನುಮಂತ ಅಮಾಥಿ ಮೇಲೆ ಚಾಕುವಿನ ಹಲ್ಲೆ ನಡೆಸಿದ್ದಾನೆ. ಈ ಸಂಧರ್ಭದಲ್ಲಿ ಆತ್ಮರಕ್ಷಣೆಗಾಗಿ ಹೊಸಮನೆ ಪಿ ಎಸ್ ಐ ಕೃಷ್ಣಕುಮಾರ್ ಪಿ ಮಾನೆ ಆರೋಪಿ ಕೊಕ್ಕೋ ಆಲಿಯಾಸ್ ಕುಮಾರನ ಬಲಗಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿ, ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ..
ಕಾರ್ಯಾಚರಣೆ ತಂಡದಲ್ಲಿ ಹೊಸಮನೆ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ಆದರ್ಶ , ತೇಜು ಕುಮಾರ್ ಹನುಮಂತ ಅಮಾಥಿ ಇದ್ದರು ಎನ್ನಲಾಗಿದೆ.
ಬ್ಯೂರೋ ವರದಿ