ಗಂಡನನ್ನೇ ಫಿನಿಷ್ ಮಾಡಿದ ಶಾಲಾ ಶಿಕ್ಷಕಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ.

ಹದ್ದಿನಕಣ್ಣು ನ್ಯೂಸ್ 24-08-2025
ಭದ್ರಾವತಿ :  ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಶಿಕ್ಷಕಿ ಕೆಲಸದಲ್ಲಿರುವ ಲಕ್ಷ್ಮಿ 2016  ಸಾಲಿನಲ್ಲಿ ತನ್ನ ಪ್ರಿಯಕರ ನೊಂದಿಗೆ ಸೇರಿ ಗಂಡನನ್ನೇ ಫಿನಿಷ್ ಮಾಡಿದ್ದ  ಘಟನೆಯ ಬಗ್ಗೆ ನ್ಯೂಟೌನ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣವನ್ನು ಬೇಧಿಸಿದ ನ್ಯೂ ಟೌನ್ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಆರೋಪಿಗಳಿಗೆ  ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ.

ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ನಗರದ ಜನ್ನಾಪುರ ಎನ್ ಟಿ ಬಿ ರಸ್ತೆಯ ವಾಸಿ ಲಕ್ಷ್ಮಿ ಮತ್ತು ಗುಲಬರ್ಗಾದಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕ ರಾಗಿದ್ದ  ಇಮ್ತಿಯಾಜ್ ಈ ಇಬ್ಬರ ನಡುವೆ ಸುಮಾರು 5 ವರ್ಷಗಳ ಹಿಂದೆ ಲಕ್ಷ್ಮೀ ಗುಲ್ಬರ್ಗ ಜಿಲ್ಲೆಯಲ್ಲಿ ಇದ್ದಾಗ  ಪ್ರೇಮಾಂಕುರವಾಗಿದೆ. ಈ ಪ್ರೀತಿ ಮದುವೆ ತನಕ ಹೋಗಿ ರಿಜಿಸ್ಟರ್ ಮದುವೆ ಕೂಡ ಆಗಿದ್ದಾರೆ. ಮದುವೆ ನಂತರ ಇಮ್ತಿಯಾಜ್ ಗುಲ್ಬರ್ಗದಿಂದ ಸೊರಬ ತಾಲ್ಲೂಕಿನ ತೆಲಗುಂದ ಗ್ರಾಮದ ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು ಮತ್ತು ಈ ನಡುವೆ ಪತ್ನಿ ಲಕ್ಷ್ಮೀ ಕೂಡ ಭದ್ರಾವತಿಯ ಅಂತರಗಂಗೆ ಶಾಲೆಗೆ ಬಂದು ಕೆಲಸ ಮಾಡುತ್ತಿದ್ದರು.

ಇಬ್ಬರ ಸಾಂಸಾರಿಕ ಜೀವನವು ಸುಗಮವಾಗಿ ಸುಮಧುರವಾಗಿ ಸಾಗುತ್ತಿತ್ತು.  ಹೀಗಿರುವಾಗ ಲಕ್ಷ್ಮೀ ಬಾಲ್ಯ ಸ್ನೇಹಿತ ಕೃಷ್ಣಮೂರ್ತಿ ಎಂಟ್ರಿ ಕೊಟ್ಟಿದ್ದ. ಆತನೂ ಸಹ ಲಕ್ಷ್ಮೀ ಮನೆ ಬಳಿಯೇ ಮನೆ ಮಾಡಿ ಕೊಂಡಿದ್ದ. ಇದನ್ನೇ ಸದುಪಯೋಗ ಮಾಡಿಕೊಂಡಿದ್ದ ಕಿಟ್ಟಿ ಲಕ್ಷ್ಮೀಯೊಂದಿಗೆ ಸಲುಗೆಯಿಂದ ಇರುವಂತೆ ಮಾಡಿತ್ತು. ಇದು ಗಂಡ ಇಂತಿಯಾಜ್ ಗೆ ಇಷ್ಟವಾಗಲಿಲ್ಲ. ಪರಿಣಾಮ ದಂಪತಿಯಲ್ಲಿ ಕಲಹ ಉಂಟಾಯಿತು. ಅಲ್ಲದೇ ಇವರ ಸಂಬಂಧದ ಬಗ್ಗೆ, ಅನುಮಾನ ಬಂದು ಕೃಷ್ಣಮೂರ್ತಿ ಯೊಂದಿಗೆ ಏಕೆ ಹೆಚ್ಚಾಗಿ ಪೋನ್ ಮಾಡುವುದು, ಮೆಸೇಜ್ ಮಾಡುವುದು ಮಾಡುತ್ತೀಯಾ ಎಂದು ಆಗಾಗ ಜಗಳ ಮಾಡುತ್ತಿದ್ದರು. 

ಈ ವಿಷಯವಾಗಿ ಸ್ನೇಹಿತ ಕೃಷ್ಣಮೂರ್ತಿ ಹಾಗೂ ಲಕ್ಷ್ಮೀಗೆ ಸಂಬಂಧಿಕರು ಬುದ್ದಿವಾದ ಹೇಳಿದ್ದರೂ ಪ್ರಯೋಜನ ವಾಗಿಲ್ಲ. ಹೀಗಿರುವಾಗ ಇಮ್ತಿಯಾಜ್ ಹೆಂಡತಿ ಮನೆಗೆ ಹೋಗಿ ಹೆಂಡತಿ ಯನ್ನು ರಂಜಾನ್ ಹಬ್ಬಕ್ಕೆ ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ಹೋಗಿದ್ದರು. ಆಗ ಪ್ರಿಯಕರನ ಸಂಬಂಧ ಇಬ್ಬರ ನಡುವೆ ಜಗಳವಾಗಿದೆ. ಜಗಳದ ಭರದಲ್ಲಿ ಹೆಂಡತಿ ಲಕ್ಷ್ಮೀ ಗಂಡನ ತಲೆಗೆ ಆಯುಧದಿಂದ ಹಲ್ಲೆ ಮಾಡಿದ್ದಾಳೆ. ಆಗ ಗಂಡ ತೀವ್ರ ರಕ್ತಸ್ರಾವ ವಾಗಿ ಸ್ಥಳದಲ್ಲಿ ಮೃತಪಟ್ಟಿದ್ದರು. ಬಳಿಕ ಪತಿ ಇಂತಿಯಾಜ್ ತಮ್ಮನಿಗೆ ಲಕ್ಷ್ಮೀ ಪೋನ್ ಮಾಡಿ ಬೇಗ ಭದ್ರಾವತಿಗೆ ಬಾ ನಿನ್ನ ಹತ್ತಿರ ಮಾತನಾಡುವುದಿದೆ ಎಂದು ಹೇಳಿದ್ದಾಳೆ. ಮೃತ ಇಮ್ತಿಯಾಜ್ ತಮ್ಮ ಸೀದಾ ಮನೆಯಿಂದ ಹೊರಟು ಭದ್ರಾವತಿಯ ಲಕ್ಷ್ಮಿ ಮನೆಗೆ ಬಂದಿದ್ದಾನೆ. ತಮ್ಮ ಹೋಗುತ್ತಿದ್ದಂತೆ ಲಕ್ಷ್ಮೀ ಜೋರಾಗಿ ಅಳಲು ಶುರುಮಾಡಿ ದ್ದಾಳೆ. ಅಲ್ಲದೇ ಏನಾಯಿತು ಹೇಳಿ ಏಕೆ ಅಳುತ್ತಿರಾ ಎಂದು ಕೇಳಿದ್ದಾರೆ. ಅದಕ್ಕೆ ಲಕ್ಷ್ಮೀ ನಿನ್ನ ಅಣ್ಣ ಹೋದರು ಎಂದು ಹೇಳಿದ್ದಾಳೆ. ನಿನ್ನೆ ರಾತ್ರಿ 7-30 ಕ್ಕೆ ನನಗೂ ಮತ್ತು ನನ್ನ ಗಂಡನಿಗೂ ಜಗಳವಾಗಿತ್ತು ಎಂದಿದ್ದಾಳೆ.

ಇದೇನಾ ಶಿಕ್ಷಕಿ ಲಕ್ಷ್ಮಿ ಕೊಟ್ಟ ಕಾರಣ......!
ನನ್ನ ಗಂಡ ಇಮ್ತಿಯಾಜ್ ಹಲವು  ದಿನಗಳಿಂದ ನನ್ನ ಸ್ಯಾಲರಿಯಲಿ, ಲೋನ್ ಮಾಡಿಕೊಡು ಮತ್ತು ಕೃಷ್ಣಮೂರ್ತಿಯೊಂದಿಗೆ ಸಂಬಂಧ ಇದೆ ಎಂದು ಅನುಮಾನಗೊಂಡು ಹಿಂಸೆ ಮಾಡಿ ಹೊಡೆಯುತ್ತಿದ್ದರು. ಈ ದಿನ ಅದೇ ವಿಷಯದಲ್ಲಿ ವಿಪರೀತ ಜಗಳ ಮಾಡಿ ನನಗೆ ತುಂಬಾ ಹೊಡೆದರು. ನನಗೆ ಮೈ ಕೈ ನೋವಾಗಿ ಸಿಟ್ಟಿನಿಂದ ಮನೆ ಯಲ್ಲಿದ್ದ ಒಂದು ಕಬ್ಬಿಣದ ಪೈಪ್ ತೆಗೆದುಕೊಂಡು ನನ್ನ ಗಂಡನ ತಲೆಗೆ ಹೊಡೆದೆ. ಆಗ ಅವರು ಕೆಳಕ್ಕೆ ಬಿದ್ದರು. ತಲೆಯಲಿ ರಕ್ತ, ಬಂದು ನೆಲವೆಲ್ಲ, ರಕ್ತವಾಯಿತು. ನಾನು ಗಾಬರಿಯಾಗಿ ಏನು ಮಾಡಬೇಕೆಂದು ಗೊತ್ತಾಗದೆ ನನ್ನ ಪರಿಚಯದ ಮತ್ತು ಪಕ್ಕದ ಮನೆಯವರಾದ ಶಿವರಾಜ ಮತ್ತು ಅವರ ತಮ್ಮ ಕೃಷ್ಣಮೂರ್ತಿ ರವರ ಮನೆಗೆ ಹೋಗಿ ಬಾಗಿಲು ಬಡಿದು ಅವರಿಗೆ ವಿಷಯ ತಿಳಿಸಿದೆ ಎಂದಳು.

ಶವವನ್ನು ಭದ್ರಾನದಿಗೆ ಎಸೆದರಾ......?

ಇಮ್ತಿಯಾಜ್ ಮೃತ ನಂತರ ಲಕ್ಷ್ಮೀ ಹಾಗೂ ಕೃಷ್ಣಮೂರ್ತಿ ಸ್ನೇಹಿತ ಶಿವರಾಜ್ ಹೆಣವನ್ನು ಹೊಳೆಗೆ ಎಸೆಯೋಣ ಎಂದು ತೀರ್ಮಾನಿಸಿಕೊಂಡು,ಬಳಿಕ ಹೆಣವನ್ನು ಬಟ್ಟೆಯಲ್ಲಿ, ಸುತ್ತಿ ರಾತ್ರಿ ಶವವನ್ನು ಹೊಳೆಗೆ ಎಸೆದಿದ್ದಾರೆ. ಅಲ್ಲದೇ ನಾನು ಕೂಡ ಸಾಯಬೇಕು ಎಂದುಕೊಂಡೆ ಆದರೆ ನನ್ನ ಮಗು ಚಿಕ್ಕದಿದೆ ಹಾಗಾಗಿ ಬದುಕಿದ್ದೀನಿ, ದಯವಿಟ್ಟು ಯಾರಿಗೂ ಹೇಳಬೇಡ, ನೀನೇ ನನ್ನನ್ನು ಕಾಪಾಡಬೇಕು.ಲಕ್ಷ್ಮೀ ತನ್ನ ಸ್ನೇಹಿತರಿಗೆ ಹೇಳಿದ್ದಳು. 

ಮೊದಲನೇ ಆರೋಪಿಯಾದರೆ, ಕೃಷ್ಣಮೂರ್ತಿ @ ಕಿಟ್ಟಿ ಬಿನ್ ರಾಮಯ್ಯ, ಡ್ರೈವರ್ ಕೆಲಸ ವಾಸ ಎನ್.ಟಿ.ಬಿ ರಸ್ತೆ, ಜನ್ನಾಪುರ ಎರಡನೇ, ಶಿವರಾಜ @ ಶಿಷು @ ಶಿವರಾಜ ವಾಸ ಎನ್‌.ಟಿ.ಬಿ ರಸ್ತೆ, ಜನ್ನಾಪುರ ಈ ಮೂವರು ಆರೋಪಿಗಳಾಗಿರುವ ಪ್ರಕರಣ ಬೆನ್ನತ್ತಿದ ಆಗಿನ ಪಿಎಸ್ ಐ ಚಂದ್ರಶೇಖರ್ ಪ್ರಕರಣದ ಬಗ್ಗೆ ಸಂಪೂರ್ಣ  ತನಿಖೆ ನಡೆಸಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ.ವಾದ ಮಂಡಿಸಿ ಕೊಲೆ ಮಾಡಿದ ಆರೋಪಿಗಳಿಗೆ ಜೈಲು ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಗೆ ಮಾನ್ಯ ನ್ಯಾಯಾಲಯದಿಂದ ವಿಧಿಸಿದ ಶಿಕ್ಷೆ.

ಐಪಿಸಿ 302 ರಡಿ ಶಿಕ್ಷಾರ್ಹ ಅಪರಾಧಕ್ಕೆ 1 ಮತ್ತು 2ನೇ ಆರೋಪಿಗಳಿಗೆ ಮರಣದಂಡನೆ ಅಂದರೆ ಗಲ್ಲಿಗೇರಿಸುವ ಶಿಕ್ಷೆ ಮತ್ತು 3 ಲಕ್ಷ ರೂ.ಗಳ ದಂಡವನ್ನು ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದ್ದಲಿ 3 ವರ್ಷಗಳ ಕಾಲ ಸಾದಾ ಸೆರೆವಾಸ ಮತ್ತು ಐಪಿಸಿ 201 ರಡಿ ಶಿಕ್ಷಾರ್ಹ ಅಪರಾಧಕ್ಕೆ 1 ರಿಂದ 3ನೇ ಆರೋಪಿಗಳಿಗೆ ತಲಾ 7 ವರ್ಷಗಳ ಕಠಿಣ ಸೆರವಾಸ ಮತ್ತು 1 ಲಕ್ಷ ರೂಗಳ ದಂಡವನ್ನು ವಿಧಿಸಿದ್ದು ದಂಡ ಪಾವತಿಸಲು ತಪ್ಪಿದ್ದಲ್ಲಿ. 1 ವರ್ಷ ಸಾದಾ ಸೆರವಾಸ ಮತ್ತು1 ರಿಂದ 3ನೇ ಆರೋಪಿಗಳು ದಂಡ ಪಾವತಿ ಮಾಡಿದರೆ 357 ಸಿಆರ್.ಪಿಸಿ ರೀತ್ಯ 10 ಲಕ್ಷ ರೂಗಳನ್ನು ಮೃತ ಇಮ್ತಿಯಾಜ್ ಅಹಮದ್ ಖಾನ್ ರವರ ತಾಯಿ ಶ್ರೀಮತಿ ಮಮ್ರಾಜ್ ಬೇಗಂ ಕೋಂ ನಜೀರ ಅಹಮದ್ ರವರಿಗೆ ಕೊಡಲು ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ, ಮಾನ್ಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ(ಪೀಠಾಸೀನ, ಭದ್ರಾವತಿ) ರವರು ಆದೇಶ ಹೊರಡಿಸಿದ್ದಾರೆ.

ಪ್ರಕರಣವನ್ನು ಬೇಧಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ಆಗಿನ ನ್ಯೂ ಟೌನ್ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಚಂದ್ರ ಶೇಖರ್ ಹಾಗೂ ಸಿಬ್ಬಂದಿಗಳ ತಂಡಕ್ಕೆ ಜಿಲ್ಲಾ ಪೋಲೀಸ್ ಅಧೀಕ್ಷಕರು ಪ್ರಶಂಶಿಸಿದ್ದಾರೆ.

ಬ್ಯೂರೋ ವರದಿ

Popular posts from this blog

ಅರಬಿಳಚಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಖಾಲಿ ಇರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.

ಹಾರನಹಳ್ಳಿ ಗೃಹರಕ್ಷಕದಳ ಘಟಕದ ವತಿಯಿಂದ ಮಹಿಳೆಯರಿಗೆ ಸನ್ಮಾನ.

ಭದ್ರಾವತಿ ನಗರದ ಮೂಲೆಕಟ್ಟೆಯಲ್ಲಿ ಕಾರು ಬೈಕ್ ಗೆ ಅಪಘಾತ ಕರ್ತವ್ಯ ನಿರತ ಸಂಗಯ್ಯ.ಎಂ, ಗೃಹರಕ್ಷಕ ಸ್ಥಳದಲ್ಲಿಯೇ ಸಾವು.