ಶಿವಮೊಗ್ಗ ನಗರದಾದ್ಯಂತ ಸುರಕ್ಷಿತ ಸಿಟಿ ಬಸ್ ಸೇವೆಗೆ ಜಿಲ್ಲಾ ಪೊಲೀಸ್ ಮಹತ್ವದ ಹೆಜ್ಜೆ.
ಹದ್ದಿನ ಕಣ್ಣು ಕನ್ನಡ ಡಿಜಿಟಲ್ ಸುದ್ದಿವಾಹಿನಿ 18-07-2026
ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಗರದಲ್ಲಿನ ಎಲ್ಲಾ ಸಿಟಿ ಬಸ್ ಮಾಲೀಕರು, ಚಾಲಕರು ಹಾಗೂ ನಿರ್ವಾಹಕರ ಸಭೆತನ್ನು ಡಿ ಎ ಆರ್ ಜಿಲ್ಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಶಿವಮೊಗ್ಗ ಉಪವಿಭಾಗ ಅವರು ಭಾಗವಹಿಸಿ ಬಸ್ ಮಾಲೀಕರು, ಚಾಲಕರು ಹಾಗೂ ನಿರ್ವಾಹಕರ ಸಮಸ್ಯೆ ಗಳು ಮತ್ತು ಸಲಹೆಗಳನ್ನು ಆಲಿಸಿ, ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಮಹತ್ವದ ಸೂಚನೆಗಳನ್ನು ನೀಡಿದರು.
ಬಸ್ ಮಾಲೀಕರು, ಚಾಲಕರು ಹಾಗೂ ನಿರ್ವಾಹಕರಿಗೆ
ಪೋಲಿಸ್ ಉಪಾಧೀಕ್ಷಕರಿಂದ ಸೂಚನೆಗಳು.
1.ಎಲ್ಲಾ ಸಿಟಿ ಬಸ್‌ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಬೇಕು.
2. ಚಾಲಕರು ಮತ್ತು ನಿರ್ವಾಹಕರು ರಸ್ತೆ ಸಂಚಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕು.
3.ಪ್ರಯಾಣಿಕರು ಕೈತೋರಿಸಿದ ಸ್ಥಳಗಳಲ್ಲಿ ಬಸ್ ನಿಲ್ಲಿಸದೆ, ನಿಗದಿಪಡಿಸಿರುವ ಬಸ್ ನಿಲ್ದಾಣಗಳಲ್ಲಿ ಮಾತ್ರ ಪ್ರಯಾಣಿಕ ರನ್ನು ಹತ್ತಿಸುವ ಮತ್ತು ಇಳಿಸುವಂತೆ ಸೂಚಿಸಲಾಯಿತು.
4.ಬಸ್ ಚಾಲನೆ ಸಂದರ್ಭದಲ್ಲಿ ಚಾಲಕರು ಮೊಬೈಲ್ ಬಳಸಬಾರದು, ಹೀಗೆ ಹಲವು ಸೂಚನೆಗಳನ್ನು ನೀಡಿದರು.
5.ಬಸ್ಸನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡದೇ ಬಸ್ಸು ನಿಲ್ದಾಣದ ಬಳಿಯಲ್ಲಿಯೇ ಬಸ್ ನಿಲುಗಡೆಗೊಳಿಸುವುದು.
ನಾಗರೀಕರ ಸಹಾಯಕ್ಕೆ ಪೋಲಿಸ್ ಇಲಾಖೆಯ “Public Eye” ಸದಾ ಸಜ್ಜಾಗಿದೆ.
ಪ್ರಯಾಣಿಕರ ಸುರಕ್ಷತೆಯನ್ನು ಬಲಪಡಿಸಲು ಸಹ ಹೆಚ್ಚಿನ ಒತ್ತು ನೀಡಿಲಾಗಿದ್ದು , ಬಸ್ ಚಾಲಕರು ಅಥವಾ ನಿರ್ವಾಹಕರು ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದರೆ, ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಸಿದರೆ, ಜೋರಾಗಿ ಅಸಭ್ಯ ಹಾಡುಗಳನ್ನು ಬಸ್ಸಿನಲ್ಲಿ ಪ್ರಸಾರಗೊಳಿಸಿದರೆ ಅಥವಾ ಇನ್ನಾವುದೇ ರೀತಿಯ ಸಮಸ್ಯೆಗಳ ಕುರಿತು ಸಾರ್ವಜನಿಕರು ಸುಲಭವಾಗಿ ದೂರು ಸಲ್ಲಿಸಲು ಅನುಕೂಲವಾಗುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ “Public Eye”, ಶಿವಮೊಗ್ಗ ಸಂಚಾರ ಪೊಲೀಸ್ ಸಹಾಯವಾಣಿ ಹಾಗೂ ಪೊಲೀಸ್ ತುರ್ತು ಸಹಾಯವಾಣಿ 112 ಸಂಖ್ಯೆಗಳನ್ನು ಹೊಂದಿರುವ ಪೋಸ್ಟರ್ ಗಳನ್ನು ಎಲ್ಲಾ ಸಿಟಿ ಬಸ್‌ಗಳಲ್ಲಿ ಅಳವಡಿಸಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಗಮನಹರಿಸಬೇಕಿದೆ
ಎಂಬುದಾಗಿ ಜಿಲ್ಲಾ ಪೋಲಿಸ್ ವತಿಯಿಂದ ಸೂಚಿಸಲಾಯಿತು.
ಸಭೆಯಲ್ಲಿ ಟ್ರಾಫಿಕ್ ಪೋಲಿಸ್ ಇನ್ಸ್ ಪೆಕ್ಟರ್ ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೋಲಿಸ್ ಠಾಣೆಗಳ ಪಿ ಎಸ್ ಐ ರವರುಗಳು ಭಾಗವಹಿಸಿದ್ದರು
ಬ್ಯೂರೋ ವರದಿ
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ
9663391331