ಬೀದಿ ದೀಪಗಳಿಗೆ ಪ್ಲೆಕ್ಸ್ , ಬ್ಯಾನರ್ ಇತರೇ ಪಲಕಗಳನ್ನು ಅಳವಡಿಸಿದನ್ನು ನಿಷೇದಿಸಲಾಗಿದೆ ಎಂದ ನಗರಸಭೆ.

ಹದ್ದಿನಕಣ್ಣು ಡಿಜಿಟಲ್ ಮೀಡಿಯಾ 03-09-2026
ಭದ್ರಾವತಿ :  ನಗರಸಭೆ ವ್ಯಾಪ್ತಿಗೆ ಒಳಪಡುವ  ಮುಖ್ಯ ರಸ್ತೆಗಳಾದ ಡಾ|| ರಾಜ್ ಕುಮಾರ್ ರಸ್ತೆಯಿಂದ ಚನ್ನಗಿರಿ ರಸ್ತೆ, ಬಿ.ಹೆಚ್ ರಸ್ತೆಯಿಂದ ಕಡದಕಟ್ಟೆ ಐ.ಟಿ.ಐ ಕಾಲೇಜಿನ ವರೆಗೂ ಹಾಗೂ ಮಹಾತ್ಮ ಗಾಂಧೀ ರಸ್ತೆಯಿಂದ ತರೀಕೆರೆ ರಸ್ತೆ ಹಾಗೂ ಹೊಳೆಹೊನ್ನೂರು ರಸ್ತೆವರೆಗೂ ಮತ್ತು ಇನ್ನೀತರೇ ಕಡೆಗಳಲ್ಲಿ ಅಳವಡಿಸಲಾಗಿರುವ
ಎಲ್ಲಾ ಬೀದಿ ದೀಪ ಕಂಬಗಳಿಗೆ ಯಾವುದೇ ಸಂಘ ಸಂಸ್ಥೆಯವರು, ಧಾರ್ಮಿಕ ಸಂಸ್ಥೆಯವರು , ಎಲ್ಲಾ ರಾಜಕೀಯ ಪಕ್ಷದವರು ಮತ್ತು ಸಾರ್ವಜನಿಕರು
ಯಾವುದೇ ರೀತಿಯ ಬ್ಯಾನರ್, ಪ್ಲೆಕ್ಸ್ ಹಾಗೂ ಇತರೇ ಯಾವುದೇ ರೀತಿಯ ಫಲಕಗಳನ್ನು ಕಟ್ಟುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಭಾರೀ ತೊಂದರೆಯಾಗುತ್ತಿರುವುದರಿಂದ ಕಡ್ಡಾಯವಾಗಿ ಬ್ಯಾನರ್, ಪ್ಲೆಕ್ಸ್ ಹಾಗೂ ಇತರೇ ಯಾವುದೇ ರೀತಿಯ ಫಲಕಗಳನ್ನು ಕಟ್ಟುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದಾಗ್ಯೂ ಬೀದಿ ದೀಪಗಳಿಗೆ  ಬ್ಯಾನರ್, ಪ್ಲೆಕ್ಸ್ ಅಳವಡಿಸುವವರ ವಿರುದ್ದ ಸೂಕ್ತ ಕಾನೂನು ರೀತಿಯ ಕ್ರಮವಹಿಸಿ. ತೆರವುಗೊಳಿಸಲಾಗುವುದೆಂದು ನಗರಸಭೆ ವತಿಯಿಂದ ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬ್ಯೂರೋ ವರದಿ

Popular posts from this blog

ಅರಬಿಳಚಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಖಾಲಿ ಇರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.

ಹಾರನಹಳ್ಳಿ ಗೃಹರಕ್ಷಕದಳ ಘಟಕದ ವತಿಯಿಂದ ಮಹಿಳೆಯರಿಗೆ ಸನ್ಮಾನ.

ಭದ್ರಾವತಿ ನಗರದ ಮೂಲೆಕಟ್ಟೆಯಲ್ಲಿ ಕಾರು ಬೈಕ್ ಗೆ ಅಪಘಾತ ಕರ್ತವ್ಯ ನಿರತ ಸಂಗಯ್ಯ.ಎಂ, ಗೃಹರಕ್ಷಕ ಸ್ಥಳದಲ್ಲಿಯೇ ಸಾವು.