ಸಾನವಿ ಭಾರದ್ವಾಜ್ ರವರು ಭರತನಾಟ್ಯದ ಮೂಲಕ ಶ್ರೀ ಚಾಮುಂಡೇಶ್ವರಿ ದೇವಿಗೆ ಅಷ್ಟಾವಧಾನ ಸೇವೆ ಅರ್ಪಿಸಿದರು.

ಭದ್ರಾವತಿ:ನಗರಸಭೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಶಿವಮೊಗ್ಗ ಕರ್ನಾಟಕ ಕಲಾಶ್ರೀ ವಿದೂಷಿ ಪುಷ್ಪ ಕೃಷ್ಣಮೂರ್ತಿರವರ ಶಿಷ್ಯೆ ಸಾನವಿ ಭಾರದ್ವಾಜ್ ಶ್ರೀ ಚಾಮುಂಡೇಶ್ವರಿ ದೇವಿಗೆ ಭರತನಾಟ್ಯದ ಮೂಲಕ ಅಷ್ಟಾವಧಾನ ಸೇವೆ ಅರ್ಪಿಸಿದರು.
ನಾಡಹಬ್ಬ ದಸರಾ ಸಂದರ್ಭದಲ್ಲಿ ಕೆಲವು ವರ್ಷಗಳಿಂದ
ದೇವಿಗೆ ಭರತನಾಟ್ಯ ಸೇವೆ ಸಲ್ಲಿಸಲಾಗುತ್ತಿದ್ದು, ಈ ಭಾರೀ ಅಷ್ಟಾವಧಾನ ಸೇವೆ ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾಗಿದ್ದಾರೆ, ಅಷ್ಟಾವಧಾನ ಎಂದರೆ ದೇವರಿಗೆ ಎಂಟು ವಿಧದ ಸಾಂಪ್ರದಾಯಿಕ ಹಾಗು ಕಲಾತ್ಮಕ ಸೇವೆಗಳನ್ನು ಏಕಕಾಲದಲ್ಲಿ ಅಥವಾ ಕ್ರಮಬದ್ಧವಾಗಿ ಅರ್ಪಿಸುವ 
ಒಂದು ವಿಶೇಷ ಪೂಜಾ ವಿಧಾನವಾಗಿದೆ,ಭರತನಾಟ್ಯ ಸೇವೆ ಅರ್ಪಿಸಿದ ಕಲಾವಿದೆ ಸಾನವಿ ಭಾರದ್ವಾಜ್ ಅವರನ್ನು ನಗರಸಭೆಯ ದಸರಾ ಆಚರಣೆ ಸಮಿತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಪ್ರಥಮ ದರ್ಜೆ ಸಹಾಯಕ ಆರ್. ನರಸಿಂಹಮೂರ್ತಿ, ಪ್ರಮುಖರಾದ ಮೋಹನ್, ಎಸ್. ನರಸಿಂಹಚಾರ್, ವೈ.ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Popular posts from this blog

ಅರಬಿಳಚಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಖಾಲಿ ಇರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.

ಹಾರನಹಳ್ಳಿ ಗೃಹರಕ್ಷಕದಳ ಘಟಕದ ವತಿಯಿಂದ ಮಹಿಳೆಯರಿಗೆ ಸನ್ಮಾನ.

ಭದ್ರಾವತಿ ನಗರದ ಮೂಲೆಕಟ್ಟೆಯಲ್ಲಿ ಕಾರು ಬೈಕ್ ಗೆ ಅಪಘಾತ ಕರ್ತವ್ಯ ನಿರತ ಸಂಗಯ್ಯ.ಎಂ, ಗೃಹರಕ್ಷಕ ಸ್ಥಳದಲ್ಲಿಯೇ ಸಾವು.